By Vishal V ನಮಸ್ಕಾರ ಸ್ನೇಹಿತರೆ,ಶಾಲೆಯಲ್ಲಿ ಮೂರನೇ ಭಾಷೆ ಹಿಂದಿ ಬೇಕಾ ಬೇಡ್ವಾ? ಈ ಪರ ವಿರುದ್ಧದ ಚರ್ಚೆ ಜೋರಾಗಿರೋ ಸಮಯದಲ್ಲಿ ರಾಜ್ಯ ಸರ್ಕಾರ ಒಂದು ದೊಡ್ಡ ನಿರ್ಧಾರ ಮಾಡಿದೆ.ರಾಜ್ಯದ ಆಯ್ದ ಸರ್ಕಾರಿ ಶಾಲೆಗಳಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ ತೃತೀಯ ಭಾಷೆ ಬದಲಿಗೆ, ಅಂದ್ರೆ ಹಿಂದಿ, ಉರ್ದು, ಸಂಸ್ಕೃತ ಬದಲಿಗೆ AI ಅಂದರೆ Artificial Intelligence, ಅಂದರೆ modern technology ಅನ್ನು ಹೇಳಿಕೊಡೋಕೆ ಮುಂದಾಗಿದೆ.ಅಂದ್ರೆ, ಇನ್ನು ಮುಂದೆ high school ಮಕ್ಕಳು ಮೂರನೇ ಭಾಷೆಯನ್ನ drop ಮಾಡಿ AI technology ಬಗ್ಗೆ ಅಧ್ಯಯನ ಮಾಡಬಹುದು. ಅದಕ್ಕೆ marks ಬರುತ್ತೆ. ಒಂದು language cancel.ಸದ್ಯ, ಸುಮಾರು ಸಾವಿರದ ಆರು ನೂರ ನಲವತ್ತೆರಡು ಸರ್ಕಾರಿ ಶಾಲೆಗಳಲ್ಲಿ ಇದನ್ನು introduce ಮಾಡೋಕೆ ಸರ್ಕಾರ ತಯಾರಿ ಮಾಡಿಕೊಂಡಿದೆ.ಹಾಗಿದ್ರೆ, ಏನಿದು plan? ಇದಕ್ಕೆ ಕೆಲವರ ವಿರೋಧ ಯಾಕೆ? ಸರ್ಕಾರ ಏನು ಹೇಳ್ತಿದೆ? ಎಲ್ಲವನ್ನ quick ಆಗಿ ನಾವು check ಮಾಡ್ತಾ ಹೋಗೋಣ, ಅರ್ಥ ಮಾಡಿಕೊಳ್ತಾ ಹೋಗೋಣ.

AI ವಿಪರೀತ ಭರವಸೆ ಹುಟ್ಟುಹಾಕಿರೋ ಕ್ಷೇತ್ರ. ಇವತ್ತು ಎಲ್ಲಾ ಕಡೆ AI ವಿಸ್ತರಿಸಿಕೊಳ್ತಾ
ಇದೆ. ಹೀಗಾಗಿ ಕಾಲಕ್ಕೆ ತಕ್ಕಂತೆ update ಆಗೋಕೆ ಹೊಸ skill ಗಳನ್ನ ಕಲಿಯೋದು ಕೂಡ ತುಂಬಾ important. ಹೀಗಾಗಿ ಸರ್ಕಾರ ಶಾಲೆಯಲ್ಲಿ ಮಕ್ಕಳಿಗೆ AI ಬಗ್ಗೆ basics ಹೇಳಿಕೊಡೋಕೆ ಮುಂದಾಗಿದೆ. National Skills Qualifications Framework (NSQF) ಅಡಿಯಲ್ಲಿ AI ನ ವೃತ್ತಿಪರ ವಿಷಯ (vocational subject) ಆಗಿ ಸೇರಿಸಿಕೊಳ್ಳಲಾಗ್ತಾ ಇದೆ. NSQF ಅಂದ್ರೆ ಬರೀ theory ಅಷ್ಟೇ ಅಲ್ಲದೆ, ಓದಿನೊಂದಿಗೆ ಮಕ್ಕಳಿಗೆ practical ಆಗಿ skills ಎಲ್ಲ ಹೇಳಿಕೊಟ್ಟು ಅವರನ್ನ ಭವಿಷ್ಯದ ಉದ್ಯೋಗಗಳಿಗೆ ರೆಡಿ ಮಾಡುವ program. ಕೇಂದ್ರ ಸರ್ಕಾರದ scheme ಇದು. ಎರಡು ಸಾವಿರದ ಹದಿಮೂರರಿಂದಲೇ ಜಾರಿಯಲ್ಲಿದೆ. ಇಷ್ಟು ದಿನ NSQF ಅಡಿಯಲ್ಲಿ ಮಕ್ಕಳು IT, retail, beauty and wellness, apparel and made ups ಮುಂತಾದ skills ಅನ್ನು ಕಲಿಯೋಕೆ ಅವಕಾಶ ಇತ್ತು. ಕೆಲ ಕಡೆ ಇತ್ತು ಅಷ್ಟೇ, ಅದು. ಅದಕ್ಕೀಗ AI ನ ಕೂಡ ಸೇರಿಸುತ್ತಿದ್ದಾರೆ. Large scale ಅಲ್ಲಿ ಇದನ್ನ implement ಮಾಡೋಕೆ ಹೊರಡ್ತಾ ಇದ್ದಾರೆ. ಈ NSQF ಅಡಿಯಲ್ಲೇ ರಾಜ್ಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಮೂಲಕ ನಾಳೆ ದೊಡ್ಡ ಪ್ರಮಾಣದಲ್ಲಿ AI implement ಮಾಡ್ತೀವಿ ಅಂತ ಸರ್ಕಾರ ಹೇಳಿದೆ. AI ಅಂದ್ರೆ ಏನು? ಹೇಗೆ ಕೆಲಸ ಮಾಡುತ್ತೆ? Machine learning basics ಏನು? Data ಹೇಗೆ ಬಳಸಲಾಗುತ್ತದೆ? AI tools ಹೇಗೆ ಬಳಸಬೇಕು? ಈ ರೀತಿ AI basics ಮಕ್ಕಳಿಗೆ ಬೇಗನೆ ಹೇಳಿಕೊಡಲಾಗುತ್ತದೆ. College ಗೆ ಬರುವುದಕ್ಕಿಂತ ಮುಂಚೆ ಶಾಲಾ ಮಟ್ಟದಲ್ಲೇ. ಕರ್ನಾಟಕದ ಅಂತೀಯಂತ ಸಾವಿರದ ಆರುನೂರ ನಲವತ್ತೆರಡು ಸರ್ಕಾರಿ High school ನಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿರೋ ವಿದ್ಯಾರ್ಥಿಗಳಿಗೆ ಈ education ಕೊಡಲಾಗುತ್ತದೆ. ಇದರಲ್ಲಿ ಸಾವಿರದ ನೂರೆಂಬತ್ತು ಹೊಸದಾಗಿ apply ಆದ high school ಮತ್ತು ಮುನ್ನೂರ ಎಂಬತ್ತೊಂದು already NSQF subjects ಅನ್ನು offer ಮಾಡ್ತಾ ಇದ್ದ school ಗಳು ಸೇರಿವೆ. ಇದು ಈ AI subject ಅನ್ನು, ಇದೇ ಎರಡು ಸಾವಿರದ ಇಪ್ಪತ್ತಾರು-ಇಪ್ಪತ್ತೇಳರ ಶೈಕ್ಷಣಿಕ ವರ್ಷದಿಂದಲೇ implement ಮಾಡೋಕೆ plan ನಡೀತಾ ಇದೆ. ವಿದ್ಯಾರ್ಥಿಗಳಲ್ಲಿ ಮತ್ತೊಂದು extra subject ಓದ್ಬೇಕಲ್ಲ ಅಂತ ಬಹಳ ಚಿಂತೆ ಮಾಡುವ ಆತಂಕ ಇಲ್ಲ. ಯಾಕಂದ್ರೆ ಇದೊಂದು Option ಆಗಿ ಇಡಲಾಗುತ್ತೆ. ಅಂದ್ರೆ ಮೂರನೇ Language ಹಿಂದಿ, ಸಂಸ್ಕೃತ, ಉರ್ದು ಯಾವುದೇ ಇರಬಹುದು. ಇವುಗಳ ಬದಲಿಗೆ ವಿದ್ಯಾರ್ಥಿಗಳು ಈ AI ಯನ್ನ ಆಯ್ಕೆ ಮಾಡ್ಕೊಬಹುದು. ಶಾಲೆಗಳಲ್ಲಿ AI Education ಕೊಡಬೇಕು ಅನ್ನೋದು ಮೊದಲಿನಿಂದಲೂ ಬೇಡಿಕೆ ಇತ್ತು. Already ಪ್ರತ್ಯೇಕವಾಗಿ CBSE ಮೂರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ Computational Thinking and Artificial Intelligence (CT and AI) Curriculum Launch ಕೂಡ ಮಾಡಿದೆ. ಈಗ ರಾಜ್ಯ ಸರ್ಕಾರ ಕೂಡ ಇದೇ ರೀತಿ program ತರ್ತಾ ಇದೆ.

AI ಅತಿಥಿ ಶಿಕ್ಷಕರಿಗೆ ಇಪ್ಪತ್ತು ಸಾವಿರ ಗೌರವ ಧನ.
ಈಗ ಹೊಸ scheme ಜಾರಿಗೊಳಿಸೋಕೆ teachers ಬೇಕಲ್ಲ, ಆದ್ದರಿಂದ ಇಂತ school ಗಳಲ್ಲಿ ಒಬ್ಬೊಬ್ಬರನ್ನು ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಳ್ಳೋಕೆ ಸರ್ಕಾರ ತೀರ್ಮಾನ ಮಾಡ್ತಾ ಇದೆ. ಈ ಅತಿಥಿ ಶಿಕ್ಷಕರಿಗೆ ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿ ಗೌರವ ಧನ ಕೊಡ್ತೀವಿ ಅಂತಾನೂ ಹೇಳ್ತಾ ಇದ್ದಾರೆ. ನೇಮಕಾತಿ process ನ School Development and Monitoring Committee ನೇತೃತ್ವದಲ್ಲಿ ನಡೆಸಲಾಗುತ್ತದೆ. ಇನ್ನು ಅತಿಥಿ ಶಿಕ್ಷಕರಾಗುವರು ನಿರ್ದಿಷ್ಟ education qualification ಮತ್ತು experience ಹೊಂದಿರಬೇಕಾಗುತ್ತದೆ. Computer application, Computer science ಅಥವಾ Information technology ಇವುಗಳಲ್ಲಿ ಕನಿಷ್ಠ ಒಂದರಲ್ಲಿ Bachelor degree ಯನ್ನ complete ಮಾಡಿರಬೇಕು. ಇಲ್ಲಾಂದ್ರೆ Computer science ಅಥವಾ Information technology ಯಲ್ಲಿ Diploma ಮಾಡಿರಬೇಕು. ಹಾಗೆ ಇದರೊಟ್ಟಿಗೆ ಒಂದು ವರ್ಷ work experience ಕೂಡ ಇರಬೇಕು. ಹಾಗೆ ಸ್ಥಳೀಯ ಭಾಷೆ ಮತ್ತು English ನಲ್ಲಿ fluent ಆಗಿರಬೇಕು. ಅವರ ಸಂಬಳ ಮಾತ್ರ ಇಪ್ಪತ್ತು ಸಾವಿರ ರೂಪಾಯಿ ಅಂತೆ.
ಕೆಲಸ ಹೋಗುತ್ತೆ ತೆಗಿಬೇಡಿ
ಆದರೆ ಸರ್ಕಾರದ ಈ ನಿರ್ಧಾರಕ್ಕೆ ಭಾಷಾ ಶಿಕ್ಷಕರಿಂದ ಕೂಡ ಕರ್ನಾಟಕ ಹಿಂದಿ ಶಿಕ್ಷಕರ ಸಂಘದಿಂದ ವಿರೋಧ ವ್ಯಕ್ತವಾಗಿದೆ. ಯಾಕೆ? ಅವರು ಏನು ಹೇಳ್ತಿದ್ದಾರೆ? ಇಲ್ಲಿ ಹಿಂದಿ ಶಿಕ್ಷಕರ ವಾದ ಏನು ಅಂದ್ರೆ AI ಬೇಕು ಅಂತ ಹೇಳಿದ್ರೆ ನೀವು ಮಾಡಿ ಯಾರು ಬೇಡ ಅಂತಾರೆ ಅಂದ್ರೆ ಮೂರನೇ ಭಾಷೆಯನ್ನ ತೆಗೆದು ಇದನ್ನ ಮಾಡ್ತಿರೋದು ಸರಿಯಲ್ಲ ಅನ್ನೋದು ಮೂರನೇ ಭಾಷೆಯ ಶಿಕ್ಷಕರ ಆಕ್ರೋಶ. ಹಿಂದಿ, ಉರ್ದು, ಸಂಸ್ಕೃತ ಎಲ್ಲ ಹೇಳಿಕೊಡ್ತಿದಾರಲ್ಲ ಅವರ ಆಕ್ರೋಶ. AI ಮತ್ತು ಭಾಷೆಗಳು ಒಂದಕ್ಕೊಂದು ಪರ್ಯಾಯ ಆಗಕ್ಕಾಗಲ್ಲ. ವಿದ್ಯಾರ್ಥಿಗಳಿಗೆ ಆಧುನಿಕ technology ನು ಬೇಕು ಹಾಗೆ ಭಾಷಾ ಕಲಿಕೆ ಕೂಡ ಬೇಕು ಅಂತ ಇವರು ಹೇಳ್ತಿದಾರೆ. ಎರಡನ್ನು ಒಟ್ಟಿಗೆ ಕಲಿಯಲು ಅವಕಾಶ ಕೊಡಿ ನಮ್ಮ ಹೊಟ್ಟೆ ಮೇಲೆ ಯಾಕೆ ಹೊಡಿತಾಯಿದ್ದೀರಿ. ನಮ್ಮ ಉದ್ಯೋಗಕ್ಕೆ ಕಂಟಕ ಆಗ್ತಾ ಇದೀರಾ ಅಂತ ಕೇಳ್ತಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಒಂದು ದೊಡ್ಡ ಪ್ರತಿಭಟನೆ ಕೂಡ ಮಾಡಿದ್ದಾರೆ ಇವರು. ಎರಡು ಸಾವಿರಕ್ಕೂ ಅಧಿಕ teachers ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ರು ಕೂಡ. ಸ್ನೇಹಿತರೆ ರಾಜ್ಯದಲ್ಲಿ ಹೈಸ್ಕೂಲ್, ಪ್ರೈಮರಿ ಸ್ಕೂಲ್ ಎಲ್ಲ ಸೇರಿ ಸುಮಾರು ಆಲುವರೆ ಸಾವಿರ ಹಿಂದಿ teachers ಇದ್ದಾರೆ permanent ಇರೋರು. ಹೀಗಾಗಿ ಸರ್ಕಾರ ಸಡನ್ನಾಗಿ ಮಕ್ಕಳಿಗೆ AI ತಗೋಳೋ option ಕೊಟ್ರೆ ಮೂರನೇ ಭಾಷೆ ಕಡೆಗಣನೆ ಆಗುತ್ತೆ. ಹಿಂದಿ, ಸಂಸ್ಕೃತ, ಉರ್ದು ಎಲ್ಲ ಸೇರಿ ತೃತೀಯ ಭಾಷೆಗೆ teachers ಯಾರೇ ಇದ್ದಾರೆ ಅವರ job ಗೆ ಕಂಟಕ ಆಗುತ್ತೆ ಅನ್ನೋ ಆತಂಕ ಇವರಿಗಿದೆ. ಆದರೆ ಸರ್ಕಾರ ಹಂಗೇನು ಆಗಲ್ಲ ಈ ಎ ಅನ್ನೋದು ನಾವು ಮೂರನೇ ಭಾಷೆ ತೆಗೆದುಬಿಟ್ಟು ಮಾಡೋದಲ್ಲ ಅದು option of ಅಂತ ಇದ್ದೀವಿ ಅಷ್ಟೇ ಅಂತ ಸರ್ಕಾರ ಹೇಳ್ತಾ ಇದೆ. ಒಂದರಿಂದ ಎಂಟನೇ class ವರೆಗೆ ಮೂರನೇ language ಹಾಗೆ ಇರುತ್ತೆ. ಎಂಟು ಮತ್ತು ಒಂಬತ್ತನೇ class ನವರಿಗೆ AI optional ಆಗಿ ಬರುತ್ತೆ. ಹಾಗೂ ಅದನ್ನು ಹೇಳಿಕೊಡೋಕೆ ಪ್ರತ್ಯೇಕ guest teacher ನೇಮಕ ಆಗುತ್ತೆ. ಈಗಿರುವ ಶಿಕ್ಷಕರಿಗೆ ಏನೂ problem ಆಗಲ್ಲ ಅಂತ ಸರ್ಕಾರ ಭರವಸೆ ಕೊಡ್ತಾ ಇದೆ. ಕುಂದು ಶಿಕ್ಷಣ ಇಲಾಖೆ additional chief secretary ರಶ್ಮಿ ಬಿ ಮಹೇಶ್ ಅವರೇ ತಿಳಿಸಿದ್ದಾರೆ. ಈ ರೀತಿ clarification ಕೊಟ್ಟಿದ್ದಾರೆ. ಆದ್ರೆ ಸ್ನೇಹಿತರೆ, ಆರಂಭದಲ್ಲಿ ಹೇಳಿದ ಹಾಗೆ, ಈ ರೀತಿ experiment ಹೊಸತು ಕೂಡ ಅಲ್ಲ. ಈ vocational skill ಅಥವಾ NSQF subject, ಈ ಮೊದಲು ಕೂಡ ಇದ್ವು. IT, retail, beauty and wellness ಈ ರೀತಿ ಯಾವುದೇ subject ಅನ್ನ ನಾವು ತಗೊಳ್ತೀವಿ ಅಂತ ತಗೊಂಡ್ರೂ ಕೂಡ, ಒಂಬತ್ತು ಮತ್ತು ಹತ್ತನೇ ತರಗತಿ ಮಕ್ಕಳು ಅವಾಗ ಮೂರನೇ ಭಾಷೆ ಕಲಿಬೇಕಾಗಿರಲಿಲ್ಲ. ಆದ್ರೆ correct ಆಗಿ implement ಆಗಿರಲಿಲ್ಲ ಅವೆಲ್ಲ. ಇಡೀ ರಾಜ್ಯದಲ್ಲಿ ಬರೀ ಮುನ್ನೂರ ಎಪ್ಪತ್ತೈದು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಇವೆಲ್ಲ options ಇದ್ವು. ಹಾಗಾಗಿ ಶಿಕ್ಷಕರುಗಳು ಕೂಡ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ ಇದರ impact ಆಗುತ್ತೆ ಅಂತ. ಆದರೆ ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ಇದನ್ನ ಜಾರಿಮಾಡೋಕೆ ಹೊರಟಿರುವುದರಿಂದ ಭಾಷಾ ಶಿಕ್ಷಕರು ಇದರ ಬಗ್ಗೆ question ಮಾಡ್ತಾ ಇದ್ದಾರೆ. ನಮ್ಮ ಕಥೆ ಏನು ಅಂತ ಕೇಳುತ್ತಿದ್ದಾರೆ. ಆದರೆ ಪರ ವಿರೋಧ ಪಕ್ಕಕ್ಕೆಟ್ಟರೆ ಶಾಲಾ ಹಂತದಲ್ಲಿ AI basics ಹೇಳಿಕೊಡುವುದು ಇದೆಯಲ್ಲ ಬರಿ ಅದನ್ನ ಮಾತ್ರ ತಗೊಂಡ್ರೆ ಹೇಳಿಕೊಡುವಂತಹ ಅಷ್ಟನ್ನ ನಾವು ಚರ್ಚೆ ಮಾಡಿದ್ರೆ ಅದು good development. ಮಕ್ಕಳಿಗೆ ತುಂಬಾ help ಆಗುತ್ತೆ. ಈ AI ಹೇಗೆ ಕೆಲಸ ಮಾಡುತ್ತೆ, AI ನ ಹೇಗೆ training ಕೊಡ್ತಾರೆ. AI ಎಲ್ಲೆಲ್ಲಿ ತಪ್ಪು ಮಾಡೋ chances ಇದೆ, ಅದೆಲ್ಲ ಮಕ್ಕಳಿಗೆ ಗೊತ್ತಿರಲ್ಲ. Basic ಪಾಠ ಸಾಕು ತಿಳಿದುಕೊಳ್ಳಲು ಸಾಕಾಗಲ್ಲ. ಅದರ fundamentals ಅನ್ನು ಹೇಳಿಕೊಡಬೇಕು. ಈ AI, Machine Learning ಇದರ basics ಎಲ್ಲಾ ಕಲಿಯುವುದರಿಂದ ಮಕ್ಕಳಿಗೆ ಬೇಗ ಈ fundamentals ಎಲ್ಲಾ strong ಆಗುತ್ತೆ ಇದರಿಂದ. Next ಅವರು college ಗೆ ಹೋದಾಗ easy ಆಗುತ್ತೆ ಅದರ ಬಗ್ಗೆ understanding ಬಂದಿರುತ್ತೆ. ಅವರ ಮುಂದಿನ career ಈ technology field ನಲ್ಲಿ work ಮಾಡೋಕೆ ಹೋಗುವವರಿಗೆಲ್ಲ strong foundation ಸಿಗುತ್ತೆ. ಆದರೆ ಸುಮ್ಮನೆ ಇದು ಗಿಡಿಪಾಠ, ಕಂಠಪಾಠ ಆಗಬಾರದು, practical knowledge ಸಿಗಬೇಕು. ಸುಮ್ಮನೆ AI ನ ChatGPT open ಮಾಡೋದು ಹೆಂಗೆ? GujAIbe open ಮಾಡಿ prompt ಕೊಡೋದು ಹೆಂಗೆ? ಇಷ್ಟು ಕಲ್ತರೆ ಸಾಕಾಗೋದಿಲ್ಲ. ಸ್ವಲ್ಪ deeper ಇದರ ಬಗ್ಗೆ ಇವರು ಹೇಳಿಕೊಡೋ ಕೆಲಸ ಆಗಬೇಕು. ಹಂಗ್ ಆಗ್ಬೇಕು ಅಂತ ಹೇಳಿದ್ರೆ ಇಪ್ಪತ್ತು ಸಾವಿರ ರೂಪಾಯಿಗೆ ನೀವು ಅತೀ teachers ಕರ್ಕೊಂಡು ಬಂದು ಅದನ್ನೆಲ್ಲ ಮಾಡಕ್ಕಾಗುತ್ತಾ ಅನ್ನೋದು ದೊಡ್ಡ question mark ಇದೆ ಅಲ್ಲಿ. ಅನುಮಾನನೇ ಅದು, ನೋಡಬೇಕು. ಈ ಬಗ್ಗೆ ನಿಮ್ಮ opinion ಏನು?
source by Masth Maga and Times of India
ಈ ಹಿಂದೆ ನಾನು ಬರೆದ “ಸರ್ಕಾರಿ ಹುದ್ದೆಗಳ ಬಗ್ಗೆ ” ಇಲ್ಲಿ ಓದಿ