By Vishal v ಪ್ರಶ್ನೆ, ನೀವು ಕಡೆ ಬಾರಿ ಏನು ಮಾಡ್ದೆ ಹತ್ತು ನಿಮಿಷ ಸುಮ್ಮನೆ ಕೂತಿದ್ದು ಯಾವಾಗ? Phone ಇಲ್ಲ phone ನೋಡೋದು ಸುಮ್ನೆ ಕೂತಂಗಲ್ಲ no phone ಇಲ್ಲ YouTube ಇಲ್ಲ music ಇಲ್ಲ Instagram ಇಲ್ಲ Snapchat ಇಲ್ಲ status ಇಲ್ಲ ಯಾವುದೇ ಕೆಲಸಕ್ಕೆ ಬರ್ದೇ ಇರೋ ಯೋಚನೆ ಇಲ್ಲ ಏನು ಮಾಡ್ತಾನೆ ಇಲ್ಲ ನೀವು ಕೈಗೂ ಏನು ಕೆಲಸನೇ ಕೊಟ್ಟಿಲ್ಲ ಸುಮ್ಮನೆ ಕೂತ್ಕೊಂಡಿದ್ದೀರ. Mind ಗೂ ಕೆಲಸ ಕೊಟ್ಟಿಲ್ಲ ಸುಮ್ಮನೆ ಕೂತ್ಕೊಂಡಿದ್ದೀರ. Just mind ನ off ಮಾಡ್ಕೊಂಡು ಕೂತ್ಕೊಂಡಿದ್ದೀರ. ಯಾವಾಗ ಈ ತರ ಮಾಡಿದ್ರಿ last time ಹೇಳಿ ನೋಡೋಣ. Think ಕೂಡ ಏನು ತಲೆಗೆ ಹೋಗುವಂತಹ ವಿಚಾರ think ಮಾಡದೇ. ನಿನ್ನೆ, ಮೊನ್ನೆ, ಒಂದು ವಾರದ ಹಿಂದೆ, ಅಥವಾ ಯಾವತ್ತೂ ಮಾಡೇ ಇಲ್ವಾ? ಯಾವತ್ತು ನೀವು mind ನ off ಏ ಮಾಡಿಲ್ವಾ ಎಚ್ಚರ ಇದ್ದಾಗ? ಇವತ್ತಿನ ಕಾಲದಲ್ಲಿ 24×7 busy ಆಗಿರೋದೇ, ನಾನು ಕೆಲಸ ಮಾಡ್ತಿದೀನಿ ಅಂತ ತೋರಿಸಿಕೊಳ್ಳೋದೇ ದೊಡ್ಡ status symbol ಆಗ್ಬಿಟ್ಟಿದ್ಯಲ್ಲ. “ಅಬ್ಬಾ full tight schedule ಗುರು, ಉಸಿರಾಡಕ್ಕೂ time ಇಲ್ಲ” ಅಂತ ಹೇಳಿಕೊಳ್ಳೋದೇ ಒಂತರ ಹೆಮ್ಮೆ. “ಏನ್ ಮಾಡ್ತಾ ಇದೀನಿ” ಅಂತೇಳಿ. ಆದ್ರೂ ನಡುವೆನೂ ಅಷ್ಟೆಲ್ಲ busy ನಡುವೆ ಕೂಡ ಒಂದು ನಿಮಿಷ free ಸಿಕ್ಕರೂ ಸಾಕು, ತಕ್ಷಣ ಕೈ ಜೇಬಿಗೆ ಹೋಗುತ್ತೆ, bag ಗೆ ಹೋಗುತ್ತೆ, phone ಎತ್ತಿಕೊಳ್ಳುತ್ತೆ, scroll ಮಾಡು. ಅದು messages, update, notifications, status, Insta, YouTube whatever ಒಂದಲ್ಲ ಒಂದು ಕೆಲಸ. ಆಗ್ತಾ ಇರುತ್ತೆ. ಆ ಒಂದು ನಿಮಿಷ free ಸಿಕ್ಕಿರೋ time ಅಲ್ಲೂ ನಾವು free ಆಗಿರೋದಿಲ್ಲ. ಆಮೇಲೆ ಈಗ hustle culture ಅನ್ನೋ trap ನಲ್ಲಿ ಸಿಕ್ಕಾಕೊಂಡಿದ್ದೇವೆ. ಆದರೆ ಹೀಗೆ ಯಾವಾಗಲೂ ನಮ್ಮ brain ಅನ್ನ on mode ನಲ್ಲೇ ಇಟ್ಕೊಂಡ್ರೆ ಏನಾಗುತ್ತೆ ಗೊತ್ತ? ಇದು ಒಳ್ಳೆಯದು ಅಂತ ಅನ್ಕೊಂಡಿದ್ದೀರ ನೀವು. ಸ್ನೇಹಿತರೆ, ಇಲ್ಲ, ಘೋರ ತಪ್ಪು ಇದು. Mind ಅನ್ನ ಆಗಾಗ off ಮಾಡೋದು ನಾವು busy ಆಗಿರೋದಕ್ಕಿಂತಲೂ ತುಂಬಾ important ಗೊತ್ತಾ.
Default mode network. ಮೆದುಳು ಮಲಗಿದಾಗ ಸ್ವಯಂ ಜಾಗೃತಿ.

ಸ್ನೇಹಿತರೆ, ನೀವು ಏನು ಮಾಡ್ದೆ, ಸುಮ್ನೆ ಕೂತಾಗ ಮೆದುಳು ಕೂಡ automatically shutdown ಆಗುತ್ತೆ ಅಂತ ಅಂದ್ಕೊಂಡಿದ್ರೆ, ಅದು ತಪ್ಪು. ಮೆದುಳು ಇದೆಯಲ್ಲ, ನಾವು ಅಂದ್ಕೊಂಡಿದ್ದಕ್ಕಿಂತ ತುಂಬಾ smart ಇದು. ಎರಡು ಸಾವಿರದ ಒಂದನೇ ಇಸವಿ, Marcus Raichle ಅನ್ನೋ neuroscientist, ಇವರು ಮೆದುಳಲ್ಲಿ default mode network ಅಥವಾ DMN ಅನ್ನೋ ಒಂದು ಅದ್ಭುತ pattern ಅನ್ನು ಕಂಡುಹಿಡಿದ್ರು. ನಾವು ಯಾವುದೇ specific ಕೆಲಸ ಮಾಡ್ದೆ, ಸುಮ್ನೆ ಇದ್ದಾಗ, ನಮ್ಮ ಮೆದುಳಿನ ಕೆಲ ಭಾಗಗಳು ಒಟ್ಟಾಗಿ ಕೆಲಸ ಮಾಡೋಕೆ ಶುರು ಮಾಡ್ತವೆ. Specific ಆಗಿ ಹೇಳ್ಬೇಕು ಅಂದ್ರೆ, ಮೆದುಳಿನ ಮುಂಭಾಗದಲ್ಲಿರೋ medial prefrontal cortex ಮತ್ತು ಹಿಂಭಾಗದಲ್ಲಿರೋ posterior cingulate cortex ಒಂದಕ್ಕೊಂದು connect ಆಗಿ ಒಂದು network ತರ ಕೆಲಸ ಮಾಡ್ತವೆ. ಇಲ್ಲಿ, ನಾವು ಹೊರಗಿನ ಕೆಲಸದ ಮೇಲೆ full focus ಮಾಡ್ದಾಗ, ಈ DMN network off ಆಗಿರುತ್ತೆ. ಯಾವಾಗ ಕೆಲಸ ನಿಲ್ಲಿಸಿ relax ಆಗ್ತಿವೋ, ಆಗ ಇದು activate ಆಗುತ್ತೆ. ಉದಾಹರಣೆಗೆ, ನಾವು ಫೋನ್ ನೋಡದೆ, ಯಾರ ಜೊತೆಯೂ ಮಾತಾಡದೆ, ಸುಮ್ಮನೆ ಆಕಾಶ ನೋಡಿಕೊಂಡು ಕೂತಾಗ, ಈ DMN on ಆಗುತ್ತೆ. ನಮ್ಮ ಮೆದುಳು ಎಚ್ಚರವಾಗಿದೆ, but rest mode ನಲ್ಲಿದೆ. ಅಂದಾಗಲೆಲ್ಲ, ಈ ವಿಶಿಷ್ಟ ಸುಪ್ತ ಸ್ಥಿತಿಗೆ ಜಾರುತ್ತೆ. ಇದು ಒಂದು ರೀತಿ ನಮ್ಮ ಮೆದುಳಿನ background processing ಇದ್ದ ಹಾಗೆ. ಈ DMN mode ನಲ್ಲಿದ್ದಾಗ, ನಮ್ಮ ಮೆದುಳು ನಾವು ಆ ದಿನ ನೋಡಿದ, ಕೇಳಿದ, ಓದಿದ ಸಾವಿರಾರು information ಅನ್ನು filter ಮಾಡಿ, ಯಾವುದು ಬೇಕು, ಯಾವುದು ಬೇಡ ಅಂತ decide ಮಾಡುತ್ತದೆ. ಡಿಸೈಡ್ ಮಾಡಿ, ಅದನ್ನ memory ಯಲ್ಲಿ save ಮಾಡುತ್ತೆ. ಜೊತೆಗೆ, ನಮ್ಮ ಗಮನ ಹೊರಗಿನ ಕೆಲಸದಿಂದ ಒಳಗಿನ ಯೋಚನೆಗಳ ಕಡೆಗೆ ತಿರುಗುತ್ತೆ. ಅಂದ್ರೆ, ನಮ್ದೇ ಹಳೆಯ memory ಗಳನ್ನ rewind ಮಾಡೋಕೆ, ಮುಂದೆ ಏನಾಗ್ಬಹುದು ಅಂತ ಭವಿಷ್ಯದ ಬಗ್ಗೆ plan ಮಾಡೋಕೆ ಮತ್ತು ಬೇರೆಯವರ ಜಾಗದಲ್ಲಿ ನಿಂತು ಅವರ ಭಾವನೆಗಳನ್ನ ಅರ್ಥ ಮಾಡಿಕೊಳ್ಳೋಕೆ ಕೂಡ, ಈ DMN ತುಂಬಾನೇ help ಮಾಡುತ್ತೆ. ಅಷ್ಟೇ ಅಲ್ಲ, ಹೊಸ idea ಗಳು ಬರೋದು, creativity ಹೆಚ್ಚಾಗೋದು, ಹುಟ್ಟೋದು, Laptop ಮುಂದೆ busy ಇದ್ದಾಗ ಅಲ್ಲ, ಈ DMN mode ನಲ್ಲಿದ್ದಾಗ. Make brain off for do more creative activities
mind off how benefit for your body?
ನಿಮಗೆ ಯಾವತ್ತಾದ್ರೂ ಈ ರೀತಿ ಆಗಿದೆಯಾ ಸ್ನೇಹಿತರೆ? ಒಂದು problem ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರ್ತೀರಿ. ಎಷ್ಟು ಹೊತ್ತು ಯೋಚಿಸಿದರೂ solution ಸಿಕ್ಕಿರುವುದಿಲ್ಲ. ಆಮೇಲೆ, ಓ ಇದು ಯಾಕೋ ಆಗ್ತಾ ಇಲ್ಲ, ಬಿಡುಗೊರು ನೋಡೋಣ ಆಮೇಲೆ ಅಂತ ಹೇಳಿ ಬಿಟ್ಟುಬಿಡ್ತೀರಾ. ಆಮೇಲೆ ನಿಮ್ಮ partಗೆ ನೀವು ಸ್ವಲ್ಪ relax ಆಗ್ತಿರ್ತೀರಾ, ಏನೋ ಸುಮ್ಮನೆ ನಿಂತುಕೊಂಡು mobile ನೋಡ್ದೆ, ಏನೋ ಮಾಡ್ದೆ just ನೀವು ಸ್ವಲ್ಪ free ಆಗ್ತೀರಾ ಅಂತ ಇಟ್ಕೊಳ್ಳಿ, ಅಥವಾ ಸ್ನಾನ ಮಾಡ್ತಿರ್ತೀರಾ ಅಂತ ಇಟ್ಕೊಳ್ಳಿ, ಅಥವಾ ಸುಮ್ಮನೆ ಹಿಂಗೆ walk ಹೋಗ್ತಿರ್ತೀರಾ ಅಂತ ಇಟ್ಕೊಳ್ಳಿ. ಅಷ್ಟರಲ್ಲಿ, ಅದಕ್ಕೆ solution ಇದೆಯಲ್ಲ, ಹೀಗೆ ಮಾಡಬಹುದಲ್ವಾ? ಅಂತ sudden ಆಗಿ idea ಹೊಳ್ದಿರತ್ತೆ. ಇದರ ಕಾರಣ, ಆ time ನಲ್ಲಿ background ನಲ್ಲಿ DMN ಕೆಲಸ ಮಾಡ್ತಾ ಇರುತ್ತೆ. ನಾವು ವಿಪರೀತ ತಲೆಕೆಡಿಸಿಕೊಳ್ಳುವ ಕೆಲಸದಿಂದ ಸ್ವಲ್ಪ break ತಗೊಂಡಾಗ, ನಮ್ಮ ಮೆದುಳಿಗೆ ಹಳೆಯ ಯೋಚನೆಗಳು ಹಾಗೂ ಬೇರೆ ಬೇರೆ information ಅನ್ನ connect ಮಾಡೋಕೆ space ಸಿಗುತ್ತೆ. ಅದಕ್ಕೆ ಕೆಲವೊಮ್ಮೆ solution ಹುಡುಕೋಕೆ ಇನ್ನಷ್ಟು ಒದ್ದಾಡೋ ಬದಲು, ಆ problem ಇಂದ ಸ್ವಲ್ಪ ದೂರ ಹೋಗೋದೇ ಒಳ್ಳೆಯದು. ಯಾವಾಗಲೂ on ಇದ್ರೆ ಉಕ್ಕುತ್ತೆ cortisol ಒಂದು ಕಾರ್ engine ಅನ್ನ off ಮಾಡ್ದೆ continuously ಓಡಿಸ್ತಾನೆ ಇದ್ರೆ ಏನಾಗುತ್ತೆ ಹೇಳಿ? heat ಆಗಿ engine seize ಆಗ್ಬಿಡುತ್ತೆ, ಹೊಗೆ ಬರುತ್ತಲ್ವಾ? brain ಕೂಡ ಹಾಗೇನೆ. ನೀವು ಎಷ್ಟೇ hard worker ಆಗಿರ್ಬಹುದು, ಆದ್ರೆ ನಿಮ್ಮ nervous system ಅನ್ನ ಯಾವಾಗ್ಲೂ limit ಮೀರಿ push ಮಾಡಕ್ಕಾಗಲ್ಲ. long term ನಲ್ಲಿ ನೀವೊಬ್ಬ high performer ಆಗಿರ್ಬೇಕು ಅಂತ ಹೇಳಿದ್ರೆ, ನಿಮ್ಮ mind off ಮಾಡೋದು ನಿಮ್ಗೆ ಗೊತ್ತಿರ್ಲೇಬೇಕು. ಇದರಿಂದ ದಿನವಿಡೀ ಮೆದುಳಿನಲ್ಲಿ ತುಂಬಿಕೊಂಡಿರೋ ಬೇಡವಾದ data ಮತ್ತು stress flush out ಆಗುತ್ತೆ. ಯಾವಾಗ್ಲೂ busy ಆಗಿದ್ದಾಗ, ಯಾವಾಗ್ಲೂ screen ನೋಡ್ತಾ ಇದ್ರೆ, ಯಾವಾಗ್ಲೂ ಮೆದುಳಿಗೆ information ತುರುಕ್ತಾಲೆ ಇರ್ತೀರಾ, ಅವಾಗ ನಿಮ್ಮ bodyಯಲ್ಲಿ cortisol ಅನ್ನೋ ಒಂದು stress hormone release ಆಗುತ್ತೆ ಸ್ನೇಹಿತರೆ. ಇದರಿಂದ decision fatigue ಆಗುತ್ತೆ. ಅಂದ್ರೆ ದಿನದ ಕಡೆಯಲ್ಲಿ ಸಣ್ಣ ಸಣ್ಣ ನಿರ್ಧಾರ ತಗೋಳೋಕು server problem ಆಗುತ್ತೆ ಇಲ್ಲಿ, ಕಷ್ಟ ಆಗುತ್ತೆ. Brain ಇಂದ correct ಆಗಿ judgement ಗಳು ಬರೋದಿಲ್ಲ. ಊಟಕ್ಕೆ ಏನ್ ಮಾಡೋಣ ಅಂತ ಕೇಳಿದ್ರೆ ಸಾಕು ಸಿಟ್ಟು ಬರೋಕ್ ಶುರುವಾಗುತ್ತೆ. ಜೊತೆಗೆ Emotional control ತಪ್ಪೋಗುತ್ತೆ. ಯಾವುದರ ಮೇಲೂ Focus ಇರಲ್ಲ. ಕೋಪ, ಕಿರಿಕಿರಿ, Anxiety, Anxiety, ಕಿರಿಕಿರಿ, ಕೋಪ, ಕೋಪ, ಕಿರಿಕಿರಿ, Anxiety ಇದೇ ಚಕ್ರ ಸುತ್ತುತ್ತಾ ಇರುತ್ತೆ. ಕಡೆಗೆ ನಾವು Complete ಆಗಿ Burnout ಆಗ್ತೀವಿ. ಹಾಗಂತ ಈ Cortisol ಬರೀ Stress hormone ಮಾತ್ರ ಅಲ್ಲ. ಇದು ನಮ್ಮನ್ನ ಎಬ್ಬಿಸುವ Natural alarm clock. ಬೆಳಿಗ್ಗೆ ನಾವು ಎದ್ದ ತಕ್ಷಣ ನಮ್ಮ Bodyಯಲ್ಲಿ Natural ಆಗಿ ಈ Cortisol level high ಆಗುತ್ತೆ. ಇದನ್ನ Cortisol awakening response ಅಂತ ಕರೀತಾರೆ. ಆ ದಿನ ಪೂರ್ತಿ ನಮಗೆ ಬೇಕಾದ energy, ಕೆಲಸದ ಮೇಲೆ focus ಮತ್ತು alertness ಕೊಡೋದೇ cortisol. ಇದು bodyಗೆ ಬೇಕಾದ sugar ಮತ್ತು lipidನ್ನ supply ಮಾಡುತ್ತೆ. ಬೆಳಿಗ್ಗೆ ಎದ್ದ ಮೂವತ್ತರಿಂದ ಅರವತ್ತು ನಿಮಿಷದ ಒಳಗಡೆ ನಮ್ಮ ಕಣ್ಣಿಗೆ ಸೂರ್ಯನ ಬೆಳಕು ಬೀಳಬೇಕು. ಹೀಗೆ natural light ಕಣ್ಣಿಗೆ ಬಿದ್ದಾಗ ಬೆಳಗಿನ cortisol ಸರಿಯಾಗಿ activate ಆಗಿ ನಮ್ಮ body clock perfect ಆಗಿ set ಆಗುತ್ತೆ. ಅಷ್ಟೇ ಅಲ್ಲ, ಇದು ರಾತ್ರಿ ಸರಿಯಾದ timeಗೆ ನಮಗೆ ನಿದ್ದೆ ಬರಿಸೋ hormone release ಆಗೋಕು ಕೂಡ help ಮಾಡುತ್ತೆ ಆದರೆ ಸಮಸ್ಯೆ ಶುರುವಾಗೋದು ಎಲ್ ಗೊತ್ತಾ? Cortisol ಕೇವಲ ಬೆಳಿಗ್ಗೆ ಮಾತ್ರ high ಇರ್ಬೇಕು. ಆದರೆ ಯಾವಾಗ್ಲೂ busy ಆಗಿದ್ದಾಗ, ಯಾವಾಗ್ಲೂ screen ನಲ್ಲೇ ಮುಳುಗಿದ್ದಾಗ, ರಾತ್ರಿ ಹೊತ್ತಲ್ಲೂ ನಿಮ್ಮ ಮೆದುಳಿಗೆ information ತುರುಕ್ತಾಲೇ ಇದ್ದಾಗ, ಈ cortisol ದಿನವಿಡೀ high ನೇ ಇರುತ್ತೆ. ಕೆಳಗೆ ಬರೋದೇ ಇಲ್ಲ. Phone ನೋಡೋದು rest ಅಲ್ಲ, ಬಹಳ ಜನ ಮಾಡೋ ದೊಡ್ಡ ತಪ್ಪೇನು ಗೊತ್ತಾ? ನಾನು ಕೆಲಸದಿಂದ break ತಗೊಂಡಿದೀನಿ ಈಗ. ಆ ಸ್ವಲ್ಪ rest ಮಾಡ್ಬೇಕು ಅಂತ ಹೇಳಿ phone ತಗೊಳ್ತಾರೆ. ಸೋಫಾ ಮೇಲೆ ಬೀಳೋದು ಅಥವಾ ಹಾಸಿಗೆ ಮೇಲೆ ಬೀಳೋದು mobile ಹಿಡ್ಕೊಳ್ಳೋದು. ಮುಗೀತು! ಒಂದು ಸಲಿ ಹಂಗ್ ಹಿಡ್ಕೊಂಡ್ರಂದ್ರೆ ಒಂದು ಗಂಟೆ, ಎರಡು ಗಂಟೆ, ಮೂರು ಗಂಟೆ, ನಾಲ್ಕು ಗಂಟೆ ಕೂಡ ಟಮಾಲು. ಮತ್ತೆ ರಾತ್ರಿ ಒಂದೆರಡು ಗಂಟೆ ಆಗಿ ಇನ್ನ ಆಗದೇ ಇಲ್ಲ ಅಂತ ಅನಿಸಬೇಕು. ಓ! ಇನ್ನ ಸ್ವಲ್ಪ ಹೊತ್ತಲ್ಲಿ ಬೆಳಗಾಗುತ್ತೆ ಎದ್ದು ಓಡಬೇಕು office ಗೆ ಅಂತ. ಇಲ್ಲ ಇಲ್ಲ. ಇವಾಗ್ಲಾದ್ರೂ ಮಲಗ್ಬೇಕಂತ ಮಲಗೋದಷ್ಟೇ. ಈ ತರ ತುಂಬಾ ಜನ ಮಾಡ್ತಾರೆ. ಹಂಗ್ ಮಾಡಿದ್ರೆ ಮುಗೀತು ಕಥೆ. ಇದು rest ಅಲ್ಲ ಇದು. physical ಆಗಷ್ಟೇ ನೀವು ಸುಮ್ನೆ ಕೂತಿದೀರ ಅಷ್ಟೇ. body ಗೆ ಕೆಲಸ ಕೊಟ್ಟಿಲ್ಲ ಅಷ್ಟೇ ನೀವು. ನಿಮ್ಮ ಕಣ್ಣು ಮತ್ತು ಮೆದುಳಿಗೆ ಹೊಸ ಹೊಸ data feed ಮಾಡಿ torture ಮಾಡ್ತಾನೆ ಇರ್ತೀರ. ಸುಸ್ತ್ ಆಗ್ತಿರುತ್ತೆ ಆ system ಗೆ. ಹಾಗಿದ್ರೆ ಏನ್ ಮಾಡೋದು? real rest ಅಂದ್ರೆ ಏನು? rest ಮಾಡೋದು ಹೇಗೆ ಹಾಗಾದ್ರೆ mobile ಹಿಡ್ಕೊಳ್ದೆ? ತುಂಬಾ ಜನಕ್ಕೆ ಆಶ್ಚರ್ಯ ಆಗಬಹುದು. ಯಾವ್ ರೀ mobile ಹಿಡ್ಕೊಳ್ದೆ ಹೆಂಗ್ rest ಮಾಡಕಾಗತ್ತೆ ಅಂತೇಳಿ. ಸ್ನೇಹಿತರೆ, ಡಚ್ ಭಾಷೆಯಲ್ಲಿ ನಿಕ್ಸೆನ್ ಅಂತ ಒಂದು ಅದ್ಭುತ ಕಾನ್ಸೆಪ್ಟ್ ಇದೆ. ಅಂದ್ರೆ ಯಾವುದೇ ಪರ್ಪಸ್ ಇಲ್ದೆ ಏನೂ ಮಾಡದೆ ಇರೋದು. ಮೆಡಿಕಲ್‌ನಲ್ಲಿ ಇದಕ್ಕೆ NSDR ಅಥವಾ Non Sleep Deep Rest ಅಂತ ಕರೀತಾರೆ. ನಮ್ಮ ಭಾರತದಲ್ಲಿ ಯೋಗ ನಿದ್ರಾ ಅಂತ ಕೂಡ ಕರೀತಾರಲ್ವಾ, ಅದೇ ಇದನ್ನು ಕೂಡ. ಅಂದ್ರೆ ನಿದ್ದೆ ಮಾಡದೆ ನಿಮ್ಮ ಮೈಂಡನ್ನ ಥಿಂಕಿಂಗ್ ಮೋಡ್ ನಿಂದ ಆಚೆ ತಂದು ಬರೀ ಸೆನ್ಸೇಷನ್ ಮೋಡ್ ನಲ್ಲಿ ಇಡೋದು. ಫೋನ್ ಇಲ್ಲ, ಸುಮ್ನೆ ಕೂರೋದು. ಬಾಲ್ಕನಿಯಲ್ಲಿ ನಿಂತು ಸುಮ್ನೆ ಆಕಾಶ ನೋಡೋದು, ಯಾವ podcast ಯಾವ ಹಾಡು ಇಲ್ದೆ park ನಲ್ಲಿ ಸುಮ್ನೆ walk ಮಾಡೋದು, ಸುಮ್ನೆ ಹಾಗೆ ಯೋಗ ನಿದ್ದೆಯಲ್ಲಿ ಮಲ್ಕೊಂಡು body ನ relax ಮಾಡ್ಕೊಂಡು muscles ಎಲ್ಲ relax ಮಾಡ್ಕೊಂಡು ಪ್ರಶಾಂತವಾಗಿ mind ಅನ್ನ ಇಟ್ಕೊಳ್ಳೋದು, ನಿಮ್ಮ ಉಸಿರಾಟದ ಕಡೆಗೆ ಗಮನ ಕೊಡೋದು, ಇದು ನಿಮ್ಮ ಮೆದುಳಿಗೆ ಬೇಕಾಗಿರುವ ನಿಜವಾದ rest. Mind off ಮಾಡೋದು ಹೇಗೆ? ಬಹಳ simple. Step one, long exhale breathing. ರಾತ್ರಿ mind ವ್ಯಪರೀತ ಓಡ್ತಾ ಇದೆಯಾ? ಅಥವಾ stress ಆಯ್ತಾ? ನೀವು ಎಷ್ಟು ಸೆಕೆಂಡ್ ಉಸಿರು ತಗೊಳ್ತೀರೋ ಅದಕ್ಕಿಂತ double time ಉಸಿರನ್ನ ಹೊರಬಿಡಿ. ಇದು ನಿಮ್ಮ heart rate ಅನ್ನ normal ಮಾಡಿ, ಮೆದುಳಿಗೆ ಈಗ off ಆಗು ಅನ್ನೋ signal ಅನ್ನ ರವಾನೆ ಮಾಡುತ್ತೆ. Step two, ದಿನದಲ್ಲಿ ಕನಿಷ್ಠ ಹದಿನೈದು ನಿಮಿಷ do nothing time ಅನ್ನ fix ಮಾಡ್ಕೊಳ್ಳೋದು. ಬೆಳಿಗ್ಗೆ ಎದ್ದ ತಕ್ಷಣ ಅಥವಾ ಮಲಗೋಕು ಮುಂಚೆ ಈ ಹದಿನೈದು ನಿಮಿಷ ನಿಮ್ಮ ಹತ್ರ ಯಾವುದೇ screen ಇರಬಾರದು. Step three ಬೋರ್ ಆದಾಗ್ಲೆಲ್ಲ, traffic signal ಅಲ್ಲಿ ನಿಂತಾಗ್ಲೆಲ್ಲ phone ತೆಗೆಯುವ ಅಭ್ಯಾಸ ಬಿಡಿ. ಈ boring ಅನ್ಸೋ ನಿಮ್ಮ time ಅನ್ನ ಹಾಗೆ enjoy ಮಾಡಿ. ನಿಮ್ಮ ಸುತ್ತಮುತ್ತ ಏನಾಗ್ತಿದೆ ಅಂತೇಳಿ observe ಮಾಡಿ. Step four, left column right column trick. ವಿಪರೀತ overthinking ಮಾಡ್ಕೊಂಡು ನಾನೊಬ್ಬ thinker ಅಂತ ಅನ್ಕೊಂಡಿದ್ದೀರಾ? Overthinking ಮಾಡೋರೆಲ್ಲ thinkers ಅಲ್ಲ. So ಒಂದು paper ತಗೊಳ್ಳಿ ಸ್ನೇಹಿತರೆ. ಎರಡು column ಮಾಡಿ. Left side ನಲ್ಲಿ ನಿಮ್ಮನ್ನ ಕಾಡುವ ಇರೋ Tension ಭಯ ಎಲ್ಲಾ ಬರೆಯಿರಿ. Right side ನಲ್ಲಿ ಆ problem solve ಮಾಡೋಕೆ ನಿಮ್ಮ control ನಲ್ಲಿ ಮಾಡಬಹುದಾಗಿರೋ, ನಿಮ್ಮ ನೀವು ತಗೋಬಹುದಾಗಿರೋ, ನಿಮ್ಮ ವ್ಯಾಪ್ತಿಯಲ್ಲಿರೋ immediate steps ಏನು ಅದನ್ನ ಬರೆಯಿರಿ. ಆಮೇಲೆ left side ಅನ್ನ complete ಆಗಿ ಮರೆತುಬಿಡಿ. ನಿಮ್ಮ ಕೈಯಲ್ಲಿರೋ right side ಬಗ್ಗೆ ಮಾತ್ರ focus ಮಾಡಿ. ನೀವು ಯಾವುದನ್ನ ಸರಿಪಡಿಸಬಹುದೋ immediately ಅದರ ಬಗ್ಗೆ ಮಾತ್ರ ಗಮನ ಕೊಡಿ. ಇದು ನಿಮ್ಮ brain ಮೇಲಿರೋ mental load ಅನ್ನ ತಕ್ಷಣ ಕಮ್ಮಿ ಮಾಡುತ್ತೆ, ನಿಮ್ಮ overthinking ಅನ್ನ reduce ಮಾಡುತ್ತೆ Step five, eye movement trick. ಒಂದು ವೇಳೆ ರಾತ್ರಿ ನಿದ್ರೆ ಬರ್ತಾ ಇಲ್ವಾ, ಕಣ್ಣು ಮುಚ್ಕೊಂಡೆ ನಿಮ್ಮ ಕಣ್ಣುಗುಡ್ಡೆಗಳನ್ನ ಒಂದು ನಿರ್ದಿಷ್ಟ pattern ನಲ್ಲಿ left right ನೀವು move ಮಾಡಿ. ಇದು ನಿಮ್ಮ body ಯ proprioceptive circuits ಅನ್ನ cut ಮಾಡುತ್ತೆ. ಅಂದ್ರೆ ನಿಮ್ಮ ದೇಹ ಯಾವ position ನಲ್ಲಿದೆ ಅನ್ನೋದನ್ನೇ ಮೆದುಳು ಮರೆಯುವ ಹಾಗೆ ಮಾಡಿ automatic ಆಗಿ ನಿಮ್ಮನ್ನ deep sleep ಗೆ ತಳ್ಳೋಕೆ help ಮಾಡುತ್ತೆ. Step six, dilating gaze. ಕೆಲಸದ ಮಧ್ಯೆ ಸಿಕ್ಕಾಪಟ್ಟೆ stress ಆಗಿ Tunnel vision ಆಗ್ತಾ ಇದೆಯಾ?
ಆಗ ಒಂದೇ screen ಅಥವಾ ಒಂದೇ point ನೋಡೋ ಬದಲು ನಿಮ್ಮ ದೃಷ್ಟಿಯನ್ನ ಸ್ವಲ್ಪ ಆಗಲ ಮಾಡಿ.ಸುತ್ತ ಮುತ್ತ ಇರೋ ಇಡೀ ವಾತಾವರಣವನ್ನ ಗಮನಿಸಿ. ಇದು ನಿಮ್ಮ nervous system ಅನ್ನು high stress mode ನಿಂದ relax ಮಾಡುತ್ತೆ.ಕಡೇದಾಗಿ ಇಷ್ಟೇ ಸ್ನೇಹಿತರೆ, ನಾವು ಮನುಷ್ಯರು. ಮನುಷ್ಯರ ತರಾನೇ ಇರ್ಬೇಕು. ಯಾವಾಗ್ಲೂ ಕೆಲಸ ಮಾಡೋಕೆ ನಾವೇನು machine ಗಳಲ್ಲ.machine ಗಳು ಕೂಡ ಯಾವಾಗ್ಲೂ ಕೆಲಸ ಮಾಡಕ್ ಆಗಲ್ಲ. ಅವುಗಳಿಗೂ maintenance, repair ಎಲ್ಲವೂ ಬರುತ್ತೆ.so ಇಷ್ಟೋತ್ತು explain ಮಾಡಿದ್ದು ನಮ್ಮ ದೇಹದ mind Maintenance and repair.ಆಗಾಗ mind ಅನ್ನು off ಮಾಡೋದ್ರಿಂದ ನಿಮ್ಮ ಕೆಲಸದ quality, ನಿಮ್ಮ quality of life, energy, focus ಎಲ್ಲವೂ improve ಆಗುತ್ತೆ. ಸಾಬೀತಾಗಿದೆ. ನಮಗೂ ಕೂಡ ಈ story ಮಾಡೋ time ನಲ್ಲಿ ಸುಮಾರಷ್ಟು inputs ಸ್ನೇಹಿತರೆ neuroscientist ಆಗಿರೋ Andrew Huberman ಅವರಿಂದ ಸಿಕ್ಕಿದೆ information.ಅವರು ಮಂಡಿಸಿರೋದಷ್ಟು ವಿಚಾರಗಳು ಹಾಗೂ ನಾವು ಕೂಡ ಒಂದಷ್ಟು ಹುಡುಕಿ ತೆಗೆದು research ಮಾಡಿ ಈ special ವರದಿ ನಿಮಗೋಸ್ಕರ ಮಾಡಿದ್ದೇವೆ.
source by Mustmaga and Stanford
