PF account in customer mobile for tracking the PF amount deducted from her salary or his salary

ಸ್ನೇಹಿತರೆ,ಮುಂದಿನ ತಿಂಗಳಿಂದ ನಿಮ್ಮ ಕೈಗೆ ಬರುವ ಸಂಬಳ ಸ್ವಲ್ಪ ಕಮ್ಮಿ ಆಗಬಹುದು. Yes, ನೀವು ಕೇಳಿದ್ದು ನಿಜಾನೆ. ಆದರೆ ಗಾಬರಿಯಾಗಬೇಡಿ, ಇದು ನಿಮ್ಮ ಒಳ್ಳೆಯದಕ್ಕೇನೆ.ಇತ್ತೀಚೆಗೆ ಕೇಂದ್ರ ಸರ್ಕಾರ PF ನಲ್ಲಿ ದೊಡ್ಡ ಬದಲಾವಣೆ ಮಾಡಿದೆ. PF limit ಅನ್ನು ಹದಿನೈದು ಸಾವಿರದಿಂದ ಇಪ್ಪತ್ತೈದು ಸಾವಿರಕ್ಕೆ ಏರಿಕೆ ಮಾಡಿದೆ. ಇದರಿಂದ ನಿಮ್ಮ salary ಅಲ್ಲಿ ವ್ಯತ್ಯಾಸ ಆಗುತ್ತೆ.ಹಾಗಿದ್ರೆ ಏನಾಗುತ್ತೆ? Take home salary ಎಷ್ಟು cut ಆಗುತ್ತೆ? Pension ಗೆ ಎಷ್ಟು ಹೋಗುತ್ತೆ? ಇದರಿಂದ long term ಅಲ್ಲಿ ನಿಮಗೆ ಸಿಗುವ ಲಾಭಗಳೇನು?ಬನ್ನಿ, ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಾ ಹೋಗೋಣ.

ಏನಿದು PF?

ತುಂಬಾ ಜನರಿಗೆ PF ಅಂದ್ರೆ ಸಂಬಳದಲ್ಲಿ cut ಆಗೋ ಒಂದು amount ಅಂತ ಮಾತ್ರ idea ಇರಬಹುದು. ಆದರೆ ಇದರ ಹಿಂದಿರುವ system ಬಗ್ಗೆ complete ಆಗಿ ತಿಳ್ಕೊಳ್ಳೋಕೆ ಹೋಗದೇ ಇರಬಹುದು. ಆದರೆ ಚಿಂತೆ ಬೇಡ, ನಾವು explain ಮಾಡ್ತೇವೆ. EPFO ಅಂದ್ರೆ Employees’ Provident Fund Organisation. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಒಂದು ಬೃಹತ್ ಸಂಸ್ಥೆ. ನೀವು ಯಾವುದಾದರೂ companyಯಲ್ಲಿ employee ಆಗಿ ಕೆಲಸಕ್ಕೆ ಸೇರಿದಾಗ, ನೀವು consultant ಆಗಿದ್ದಾಗ ನಿಮಗೆ TDS cut ಆಗುತ್ತೆ, ನಿಮಗೆ EPF ಅದೆಲ್ಲಾ ಬರೋದಿಲ್ಲ. ಆದರೆ ನೀವು employee ಆಗಿ ಕೆಲಸಕ್ಕೆ ಸೇರಿದಾಗ, ನಿಮ್ಮ ಭವಿಷ್ಯದ ಭದ್ರತೆಗಾಗಿ, ಅಂದ್ರೆ ನಿಮ್ಮ retirement life ಗಾಗಿ, ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನ ಉಳಿತಾಯ ಮಾಡುವುದೇ EPF ನ ಮುಖ್ಯ ಉದ್ದೇಶ. ಇದರಲ್ಲಿ ಎರಡು ಭಾಗಗಳಿರುತ್ತವೆ: ಒಂದು ನಿಮ್ಮ contribution, ಎರಡನೆಯದು ನಿಮ್ಮ company contribution. Rules ಪ್ರಕಾರ, ನಿಮ್ಮ basic salary ಮತ್ತು DA ನ ಹನ್ನೆರಡು percent ಹಣ ನಿಮ್ಮ ಸಂಬಳದಿಂದ cut ಆಗುತ್ತೆ. ಇದು ನೇರವಾಗಿ ನಿಮ್ಮ EPF account ಸೇರುತ್ತೆ. ಇದೇ time ನಲ್ಲಿ ನೀವು ಎಷ್ಟು cut ಮಾಡ್ತೀರೋ, ಅಷ್ಟೇ ಮೊತ್ತವನ್ನ ಶೇಕಡ ಹನ್ನೆರಡರಷ್ಟು ಹಣವನ್ನ ನಿಮ್ಮ company ಕೂಡ ನಿಮ್ಮ account ಗೆ ಹಾಕಬೇಕು.

E-P-F-O


ಆದರೆ ಇಲ್ಲಿ ಒಂದು ಸಣ್ಣ twist ಇದೆ. ಹೆಚ್ಚಿನ company ಗಳಲ್ಲಿ CTC (Cost to Company) format ಅನ್ನ follow ಮಾಡ್ತಾರೆ. Employee share ಮತ್ತು Employer share ಎರಡನ್ನ ಸೇರಿಸಿನೇ package ಕೊಟ್ಟಿರ್ತಾರೆ. ಅದು salary ಅಲ್ಲೇ included ಇರುತ್ತೆ. ಅದು ಕೂಡ legally ನಡೀತಾ ಇರುವ practice ಏ. ಹಾಗೆ next step ನಲ್ಲಿ, ಈ ಹನ್ನೆರಡು ಹನ್ನೆರಡು percent ಎರಡು ಒಂದೇ account ಹೋಗಲ್ಲ. ಅದು ಎರಡು ಭಾಗವಾಗಿ divide ಆಗಿ ಹೋಗುತ್ತೆ. ಇದರಲ್ಲಿ ಯಾವುದೋ company ಹಾಕೋ ಹಣದಲ್ಲಿ ರೀತಿ ಭಾಗ ಭಾಗವಾಗಿ ಹೋಗುತ್ತೆ. EPF ಗೆ ಎಷ್ಟು, EPS ಗೆಷ್ಟು, EBLI ಗೆಷ್ಟು ಹೋಗುತ್ತೆ ಅಂತ ಇಲ್ಲಿ ನಾನು ತೋರಿಸ್ತೀನಿ screen ನಲ್ಲಿ ನಿಮಗೆ. ಆದರೆ ನಿಮ್ಮ account ಇಂದ ಹೋಗುವ ನಿಮ್ಮ employee share ಅಂತ ಆ ಹೆಸರಲ್ಲಿ ಹೋಗೋ ದುಡ್ಡು complete ಆಗಿ EPF account ಗೆ ಹೋಗುತ್ತೆ. ಇದರಲ್ಲಿ EPF ನಲ್ಲಿರೋ ಹಣ ವ್ಯಕ್ತಿ retire ಆದಾಗ lump sum ದುಡ್ಡನ್ನ ಪಡ್ಕೊಳೋಕೆ ಭವಿಷ್ಯ ನಿಧಿ ರೀತಿಯಲ್ಲಿ ಅವರಿಗೆ use ಆಗುತ್ತೆ. ಉಳಿದಿರೋ EPS ನಲ್ಲಿರೋ ಹಣ ಅವರಿಗೆ pension ಕೊಡೋಕೆ use ಆಗುತ್ತೆ. ಹನ್ನೆರಡು ವರ್ಷದ ನಂತರ big change. ಸ್ನೇಹಿತರೆ, ಇಂತಹ EPFO ನಲ್ಲಿ ಕಳೆದ ಹನ್ನೆರಡು ಎರಡು ವರ್ಷಗಳಿಂದ, 2014 ರಿಂದ PF ಕಡ್ಡಾಯ ಮಿತಿ ಕೇವಲ ಹದಿನಾಲ್ಕು ಸಾವಿರ ರೂಪಾಯಿ ಇತ್ತು. ಅಂದ್ರೆ ಹೊಸದಾಗಿ ಕೆಲಸ ಸೇರುವಾಗ ನಿಮ್ಮ basic salary ಹದಿನಾಲ್ಕು ಸಾವಿರಕ್ಕಿಂತ ಕಮ್ಮಿ ಇದ್ರೆ ಮಾತ್ರ PF ಕಡ್ಡಾಯವಾಗಿತ್ತು.

Automatically ನೀವು PF ವ್ಯಾಪ್ತಿಗೆ ಬರ್ತಾ ಇದ್ರಿ. ಆದರೆ ಹದಿನಾಲ್ಕು ಸಾವಿರಕ್ಕಿಂತ ಜಾಸ್ತಿ ಇದ್ರೆ, ಅಂತವರಿಗೆ optional ಆಗಿತ್ತು. Voluntarily ಸೇರ್ಬೇಕಾಗ್ತಾ ಇತ್ತು. ಅದಕ್ಕೆ ನಿಮ್ಮ company ಒಪ್ಕೋಬೇಕಾಗಿತ್ತು. ಆದರೆ ಈಗಿನ ಕಾಲದಲ್ಲಿ ಹಣದುಬ್ಬರ inflation ಎಷ್ಟಿದೆ, ಹದಿನಾಲ್ಕು ಸಾವಿರಕ್ಕೆ ಇವತ್ತಿನ ದಿನಗಳಲ್ಲಿ ಏನು ಬರುತ್ತೆ? ಹೇಳಿ, ಇದನ್ನ ಮನಗಂಡಿರುವ ಸರ್ಕಾರ ಈಗ ಈ ಮಿತಿಯನ್ನ ಇಪ್ಪತ್ತೈದು ಸಾವಿರ ರೂಪಾಯಿಗೆ ಏರಿಸಿದೆ. ನಿಮ್ಮ basic salary ಇಪ್ಪತ್ತೈದು ಸಾವಿರ ಇದ್ರೆ, ನೀವು ಈಗ ಕಡ್ಡಾಯವಾಗಿ PF ವ್ಯಾಪ್ತಿಗೆ ಬರ್ತೀರಿ. ಈ ಹೊಸ ನಿಯಮ 2026ರ ಸೆಪ್ಟೆಂಬರ್ 17ರಿಂದಲೇ ಜಾರಿಗೆ ಬಂದಿದೆ. ಈ ಒಂದು ನಿರ್ಧಾರದಿಂದ ದೇಶಾದ್ಯಂತ ಸುಮಾರು ಐವತ್ತೊಂದು ಲಕ್ಷ ಹೊಸ ಉದ್ಯೋಗಿಗಳು PF ವ್ಯಾಪ್ತಿಗೆ ಬರ್ತಾರೆ. ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಇದು ಗುಡ್ ನ್ಯೂಸ್. ಎಷ್ಟು ಕಟ್ಟಾಗುತ್ತೆ? ಈಗ already ಹೇಳಿದ ಹಾಗೆ, ನಿಮ್ಮ basic ಸಂಬಳದಲ್ಲಿ ಹನ್ನೆರಡು percent ಹಣ PF ಕಟ್ ಆಗುತ್ತೆ. ಹಿಂದೆ ಹದಿನಾಲ್ಕು ಸಾವಿರ ರೂಪಾಯಿ limit ಇದ್ದಾಗ, ನಿಮ್ಮ ಗರಿಷ್ಠ ಕಡಿತ ಹದಿನಾಲ್ಕು ಸಾವಿರದ ಹನ್ನೆರಡು percent ಅಂದ್ರೆ, ಸಾವಿರದ ಎಂಟನೂರು ರೂಪಾಯಿ ಇತ್ತು. Maximum ಅಷ್ಟು cut ಆಗ್ತಾ ಇತ್ತು. ಆದರೆ ಈಗ limit ಇಪ್ಪತ್ತೈದು ಸಾವಿರ ಆಗಿರೋದ್ರಿಂದ, ನಿಮ್ಮ ಸಂಬಳದಿಂದ ಗರಿಷ್ಠ ಮೂರು ಸಾವಿರ ರೂಪಾಯಿ cut ಆಗುತ್ತೆ. ಅಂದ್ರೆ, ನಿಮ್ಮ ಕೈಗೆ ಬರುವ take home salary ತಿಂಗಳಿಗೆ ಸಾವಿರದ ಇನ್ನೂರು ರೂಪಾಯಿ ಅಷ್ಟು ಕಮ್ಮಿ ಆಗುತ್ತೆ. ಅದು ನಿಮ್ಮ ಭವಿಷ್ಯಕ್ಕೆ ಎಂತ ಹೇಳುವಗೆ save ಆಗುತ್ತೆ. ಇನ್ನೊಂದು ಸನ್ನಿವೇಶ ಅಂದ್ರೆ, ನೀವು ಹದಿನಾಲ್ಕು ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುವ ಹೊಸ ಉದ್ಯೋಗಿಯಾಗಿದ್ದು, ಹಿಂದೆ ನಿಮಗೆ PF ಕಟ್ ಆಗ್ತಿರ್ಲಿಲ್ಲ ಅಂದ್ರೆ, ಈಗ ಹೊಸದಾಗಿ PF ಶುರುವಾಗುತ್ತೆ. ಅಂತಹ ಸಂದರ್ಭದಲ್ಲಿ ನಿಮ್ಮ ಕೈಗೆ ಬರುವ ಸಂಬಳದಲ್ಲಿ ಮೊದಲ ಬಾರಿಗೆ PF ಕಡಿತ ಕಾಣಿಸಬಹುದು. ಇವು ಸ್ನೇಹಿತರೆ, ಸಂಬಳದಿಂದ ಕಟ್ ಆಗೋ PF ಹಣ Retirement Life ಗೆ ತುಂಬಾ Important. ಸರ್ಕಾರ ಕೂಡ ನಿಮ್ಮ ಭವಿಷ್ಯ safe ಆಗಿರಲಿ ಅಂತಾನೆ ಈ Rules ಅನ್ನ ಮಾಡಿದೆ. ಅದು ಒಂದು Long Term Savings, ಅದನ್ನ ಅಷ್ಟು ಸುಲಭವಾಗಿ ಮಧ್ಯದಲ್ಲಿ ಮುರಿಬಾರದು. ಪಿಯಫ್ ಬದಲಾವಣೆಯಿಂದ ನಿಮ್ಮ ಕೈಗೆ ಬರೋ ದುಡ್ಡು ಕಮ್ಮಿ ಆಯ್ತು ಅಂತ ಹೇಳಿ, ಬೇಜಾರಾಗಬೇಡಿ. ಇದನ್ನ ಒಂದು long term investment ಅಂತ consider ಮಾಡಿ. ನಾವು ಮೊದಲೇ ಹೇಳಿದ ಹಾಗೆ, ನಿಮ್ಮ company ಹಾಕೋ twelve percent ವಂತಿಕೆಯಲ್ಲಿ ಎಂಟು point ಮೂರು ಮೂರು percent ಹಣ ಈ ಪಿಂಚಣಿ fundಗೆ ಹೋಗುತ್ತೆ. ಹಳೆಯ ನಿಯಮದಲ್ಲಿ ಇದು ಗರಿಷ್ಠ ಸಾವಿರದ ಇನ್ನೂರ ಐವತ್ತು ರೂಪಾಯಿ ಇತ್ತು. ಈಗ ಇದು ಎರಡು ಸಾವಿರದ ಎಂಬತ್ತೆರಡು ರೂಪಾಯಿಗೆ ಏರಿಕೆಯಾಗಿರುವುದರಿಂದ, ನಿಮ್ಮ retirement ಪಿಂಚಣಿ, lump sum ಬಿಡಿ pension ಕೂಡ ಬರುತ್ತೆ ಅಂತ ಹೇಳಿದ್ನಲ್ಲ, ಅದು ಅರವತ್ತೇಳು percent ಹೆಚ್ಚಾಗುತ್ತೆ.
ಉದಾಹರಣೆಗೆ, ನೀವು ಮೂವತ್ತು ವರ್ಷ service ಮಾಡಿದ್ರೆ, ಹಳೆ ಲೆಕ್ಕದಲ್ಲಿ ನಿಮಗೆ ತಿಂಗಳಿಗೆ ಆರು ಸಾವಿರದ ಎಂಟನೂರ ಐವತ್ತು ರೂಪಾಯಿ ಪಿಂಚಣಿ ಸಿಗ್ತಾ ಇತ್ತು. ಆದರೆ ಈ ಹೊಸ limit ನಿಂದ ನಿಮ್ಮ ಮಾಸಿಕ ಪಿಂಚಣಿ ಸುಮಾರು ಹನ್ನೊಂದು ಸಾವಿರದ ನಾನೂರು ರೂಪಾಯಿಗೂ ಅಧಿಕ ಸಿಗುತ್ತೆ. ಅಂದ್ರೆ, ನಿಮ್ಮ ನಿವೃತ್ತಿ ಜೀವನಕ್ಕೆ ದೊಡ್ಡ ಆಸರೆಯಾಗುತ್ತೆ. ಇದು pension ಹೇಳಿದ್ದು. EPFO ನಲ್ಲಿ PF cut ಆದಾಗ, ಬರೀ pension ಮಾತ್ರ ಅಲ್ವಲ್ಲ? ಉಳಿದಿರುವ ದುಡ್ಡು, ಅಂದರೆ employee share ಅನ್ನೋ ಹೆಸರಲ್ಲಿ ಹೋಗಿರೋ ದುಡ್ಡು, ಮತ್ತೆ employer share ರಲ್ಲೂ ಮೂರು point ಆರು ಏಳು percent EPF section ಗೆ ಹೋಗಿರುತ್ತಲ್ಲ? ಅದೆಲ್ಲವು ಕೂಡ Retirement ಆದಾಗ Lump Sum ಆಗಿ ಸಿಗುತ್ತೆ ದುಡ್ಡು. ಜೊತೆಗೆ, ಆ ದುಡ್ಡಿಗಿಂತಲೂ ನಿಮಗೆ Government ಬಡ್ಡಿ ಕೊಡ್ತಾ ಇರುತ್ತೆ, Compound Interest. ಬಡ್ಡಿ ಮೇಲೆ ಬಡ್ಡಿ ಬರ್ತಾ ಇರುತ್ತೆ. ಅದು ಬಡ್ಡಿ ಎಷ್ಟು ಅಂತ ಸರ್ಕಾರ ಕಾಲ ಕಾಲಕ್ಕೆ Decide ಮಾಡ್ತೀವಿ, ವರ್ಷಕ್ಕೆ ಎಷ್ಟು ಕೊಡಬೇಕು ಅಂತ ಹೇಳಿ. Right now, eight point two five percent ಬಡ್ಡಿ ಇದೆ. ಯಾವುದೇ Tax ಇಲ್ಲ. ಈ ಬಡ್ಡಿ ಅಸಲು ಯಾವುದಕ್ಕೂ Tax ಇಲ್ಲ. ಅಂದ್ರೆ, Great tool ಇದು. ಜೊತೆಗೆ, ಆಗಲೇ ಹೇಳಿದ ಹಾಗೆ, EDLI ಅನ್ನೋ ಉಚಿತ ವಿಮಾ ಸೌಲಭ್ಯ ಕೂಡ ಇರುತ್ತೆ. ಒಂದು ವೇಳೆ ಕೆಲಸ ಮಾಡ್ತಿದ್ದಾಗ ಉದ್ಯೋಗಿ ಆಕಸ್ಮಿಕವಾಗಿ ಮರಣ ಹೊಂದಿದ್ರೆ, ಅವರ ಕುಟುಂಬಕ್ಕೆ PF ಹಣದ ಜೊತೆಗೆ ಇನ್ಶೂರೆನ್ಸ್ ನ ಹಣ ಕೂಡ ಸಿಗುತ್ತೆ. ಈ ಹಿಂದೆ ಹದಿನೈದು ಸಾವಿರ limit ಇದ್ದಾಗ, ಈ coverage ಸ್ವಲ್ಪ ಕಮ್ಮಿ ಇತ್ತು. ಈಗ ನಿಮ್ಮ ವೇತನ ಮಿತಿ ಇಪ್ಪತ್ತೈದು ಸಾವಿರಕ್ಕೆ ಜಾಸ್ತಿ ಆಗಿರೋದ್ರಿಂದ, ಇನ್ಶೂರೆನ್ಸ್ coverage ಕೂಡ ಹೆಚ್ಚಾಗೋ chances ಇರುತ್ತೆ. ಖಾಸಗಿ ವಲಯದ ಉದ್ಯೋಗಿಗಳಿಗಾದರೂ ಕೂಡ ಬೇರೆ ಯಾವುದೇ life insurance ಮಾಡಿಸದೆ ಇರೋರಿಗೆ, ಇದು ಉಚಿತವಾಗಿ ಸಿಗುವ ದೊಡ್ಡ ಆರ್ಥಿಕ ಭದ್ರತೆ.

credit to mastamaga and Times of India

7

Leave a Reply

Your email address will not be published. Required fields are marked *